ಡಾ. ಟಿ. ಜಯಲಕ್ಷ್ಮಿ (ಹುಟ್ಟು: ೨೩ ಸೆಪ್ಟೆಂಬರ್, ೧೯೫೪), ಜಯಲಕ್ಷ್ಮಿ ಸೀತಾಪುರ (ಆಂಗ್ಲ: ) ಎಂದೇ ಹೆಸರಾದ, ಕನ್ನಡ ಭಾಷೆಯ ಪ್ರಮುಖ ಜಾನಪದ ವಿದ್ವಾಂಸರು. ಜನಪದ ಸಾಹಿತ್ಯ, ಜನಪದ ವೈದ್ಯಪದ್ಧತಿ, ಜನಪದ ಆಚರಣೆಗಳ ಕುರಿತ ವೈಜ್ಞಾನಿಕ ಸಂಶೋಧನೆ ಅವರ ಕಾರ್ಯಕ್ಷೇತ್ರ. ಅವರ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಜಾನಪದ ಅಕಾಡೆಮಿಯು ೨೦೧೬ನೇ ಸಾಲಿನ ಪ್ರತಿಷ್ಠಿತ ಜೀಶಂಪ ಪ್ರಶಸ್ತಿ ನೀಡಿದೆ. == ವೈಯಕ್ತಿಕ ಜೀವನ - ವೃತ್ತಿ == ಜಯಲಕ್ಷ್ಮಿ ಹುಟ್ಟಿದ್ದು ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲ್ಲೂಕಿನ ಸೀತಾಪುರ ಎಂಬ ಊರಿನಲ್ಲಿ. ಹುಟ್ಟುಹೆಸರು ವಿಶಾಲಾಕ್ಷಿ. ಗರಡಿಮನೆಯಲ್ಲಿ ಪಳಗುತ್ತಲೇ ಬಾಲ್ಯ ಕಳೆದ ಜಯಲಕ್ಷ್ಮಿ ಉನ್ನತ ಶಿಕ್ಷಣಕ್ಕೆಂದು ಊರು ಬಿಟ್ಟು ಹೊರಬಂದ ಮೊದಲ ಹೆಣ್ಣುಮಗಳಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಜೀಶಂಪ, ಪಿ. ಆರ್. ತಿಪ್ಪೇಸ್ವಾಮಿ ಮುಂತಾದವರ ಸ್ಫೂರ್ತಿಯಿಂದ ಜಾನಪದದ ಸೇವೆಗೆ ನಿಂತ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ಸೇರಿದರು. == ಲೇಖಕಿಯಾಗಿ == ಜಯಲಕ್ಷ್ಮಿ ಅವರು ಬರೆದಿರುವ ಜಾನಪದ ಸಂಬಂಧೀ ಕೃತಿಗಳು ಕನ್ನಡದ ಮಟ್ಟಿಗೆ ಗುರುತಾಗುವಂಥವು. ನಮ್ಮ ಸುತ್ತಿನ ಜನಪದ ಕಥನಗೀತೆಗಳು ಕೃತಿಯನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಕಟಿಸಿದೆ. ಹಲವಾರು ಕೃತಿಗಳು ಮರೆಯಲ್ಲಿದ್ದ ಜಾನಪದ ಸೂಕ್ಷ್ಮಗಳನ್ನು ಮುನ್ನೆಲೆಗೆ ತಂದಿವೆ. ವಿಮರ್ಶೆ ನೋ ಕಾವ್ಯ ನಮ್ಮ ಸುತ್ತಿನ ಜನಪದ ಕಥನಗೀತೆಗಳು ಎದೆ ಕದವ ತಟ್ಟಲೇ ಹಕ್ಕಿ ಹಾರ್ಯಾವೆ ಗಿಡದಾಗ ನಾಟಕ ಒಗಟನ್ನು ಬಿಡಿಸಿ ತಬ್ಬಿಬ್ಬು ಬೆಳಗು ಬೆರಗು ಸಂಶೋಧನೆ ಶೋಧ ಕನ್ನಡ ಜಾನಪದ ಕನ್ನಡದಲ್ಲಿ ಐತಿಹಾಸಿಕ ಜನಪದ ಲಾವಣಿಗಳು ಕನ್ನಡ ಸಮಗ್ರ ಗಾದೆಗಳು (ಸಂ. 3 & 4) ಐದು ಜಾನಪದ ಪ್ರಬಂಧಗಳು ಜನಪದ ಒಕ್ಕಲು ಕಲ್ಯಾಣವೆನ್ನಿ ಜನರೆಲ್ಲ ಜಾನಪದ ಹಟ್ಟಿ ವಿಶ್ಲೇಷಣೆ ಜನಪದ ಸಾಹಿತ್ಯದಲ್ಲಿ ಹಾಸ್ಯ ಜಾನಪದ ಹಬ್ಬ ಜಾನಪದ ತರಂಗ ಜೀವನಚರಿತ್ರೆ ದಿಟ್ಟ ಸಾಧಕ ಮುಂತಾದವು == ಪುರಸ್ಕಾರಗಳು == ೨೦೧೭ - ಪಾಂಡವಪುರ ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ೨೦೧೬ - ಜೀಶಂಪ ಪ್ರಶಸ್ತಿ - ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಮಂಡ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುದ್ದುಮಾದಪ್ಪ ಪುರಸ್ಕಾರ ಜಾನಪದ ಲೋಕ ಪ್ರಶಸ್ತಿ == ಸಾವು == ಜಯಲಕ್ಷ್ಮಿ ಸೀತಾಪುರ ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಹೃದಯಾಘಾತದಿಂದ ೧೬ ಜೂನ್ ೨೦೨೪ರಂದು ಸಾವನ್ನಪ್ಪಿದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. == ಇವನ್ನೂ ನೋಡಿ == ಜಾನಪದ ಹಾ.ಮಾ.ನಾಯಕ ದೇ. ಜವರೇಗೌಡ ಚಂದಗಾಲು ಬೋರಪ್ಪ ಪ್ರೀತಿ ಶುಭಚಂದ್ರ ವಿಜಯಲಕ್ಷ್ಮಿ ಮನಾಪುರ == ಉಲ್ಲೇಖಗಳು ==